ಪುಟಗಳು

ಗುರುವಾರ, ಮಾರ್ಚ್ 3, 2011

ಅತಿಥಿಗಳ ಸೇವೆ ಮಾಡುವ ಹೆಬ್ಬಯಕೆ ನಿಮ್ಮದಾಗಿದೆಯೇ....?

ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಬೆಳಗಾವಿ ನಗರಕ್ಕೆ ಬರುವ ಅತಿಥಿಗಳ ಸೇವೆ ಮಾಡುವ ಹೆಬ್ಬಯಕೆ ನಿಮ್ಮದಾಗಿದೆಯೇ....? ಹಾಗಾದರೆ, ತಡ ಮಾಡದೆ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ನೀವು ಎಷ್ಟು ಜನ ಅತಿಥಿಗಳ ಸೇವೆ ಮಾಡುತ್ತೀರಾ ಎಂಬುದರ ಬಗ್ಗೆ ತಮ್ಮ ಹೆಸರನ್ನು ನೋಂದಾಯಿಸಿ. ಜಿಲ್ಲಾಡಳಿತ ಈಗಾಗಲೇ 40 ಸಾವಿರ ಜನರಿಗೆ ಊಟ ವಸತಿ ಸೌಲಭ್ಯವನ್ನು ಕಲ್ಪಿಸುವ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಆದಾಗ್ಯೂ ಕೂಡಾ ಸಾರ್ವಜನಿಕರಿಗೆ ಅತಿಥಿಗಳಿಗೆ ಸೇವೆ ಮಾಡಲು ಜಿಲ್ಲಾಡಳಿತ ನಮ್ಮ ಮನೆ, ನಮ್ಮ ಅತಿಥಿ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಬೆಳಗಾವಿಯ ನಿವಾಸಿಗಳು ಕನ್ನಡಾಭಿಮಾನಿಗಳಿಗೆ ತಮ್ಮ ಮನೆಯಲ್ಲಿ ಊಟ, ವಸತಿ ಸೌಲಭ್ಯ ವದಗಿಸಿ ಕನ್ನಡದ ಸೇವೆಯನ್ನು ಮಾಡುವ ಸದಾವಕಾಶ ತಮಗೆ ಸಿಕ್ಕಿದೆ. ಅದಕ್ಕಾಗಿ ಆಸಕ್ತರು ಜಿಲ್ಲಾಧಿಕಾರಿಗಳ ಕಚೇರಿಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ.
 ಕೃಪೆ:ವಿಶ್ವಕನ್ನಡಸಮ್ಮೇಳನ.ಕಾಂ 

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

ವಿಶ್ವ ಕನ್ನಡ ಸಮ್ಮೇಳನ ಕಾರ್ಯಕ್ರಮದ ನೇರ ಪ್ರಸಾರ........