ಮೈಸೂರು: ಬೆಳಗಾವಿ ಕನ್ನಡ ಸಮ್ಮೇಳನ ಸಮ್ಮುಖದಲ್ಲಿ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಅವರು ತಮ್ಮ ಸಹಜ ಶೈಲಿಯಲ್ಲಿ 'ಇಂತಹ ಸಮ್ಮೇಳನಗಳು ಅರ್ಥಹೀನ. ಇವಕ್ಕೆ ಸ್ಪಷ್ಟ ಉದ್ದೇಶವೇ ಇರುವುದಿಲ್ಲ' ಎಂದೆಲ್ಲ ಹರಿಹಾಯ್ದಿದ್ದಾರೆ.
50 ವರ್ಷಗಳ ಸುದೀರ್ಘ ಹೋರಾಟದ ನಂತರವೂ ರಾಜ್ಯದಲ್ಲಿ ಕನ್ನಡ ದುಸ್ಥಿತಿಯಲ್ಲಿಯೇ ಇದೆ. ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಮೃತ ಹಸ್ತದಿಂದ ಬೆಳಗಾವಿ ಸಮ್ಮೇಳನ ಉದ್ಘಾಟಿಸುತ್ತಿರುವುದರ ಪಾವಿತ್ರ್ಯತೆಯಾದರೂ ಏನು ಎಂಬುದೇ ಅರ್ಥವಾಗದು. ಅದೆಲ್ಲಾದರೂ ಹೋಗಲಿ ಎಂದರೆ ಇದೆಂತಹುದು, ಬಾಲಿವುಡ್ ಬೆಡಗಿ ಐಶ್ವರ್ಯ ರೈ ಮತ್ತು ತಮಿಳ್ ಸೆಲ್ವಿ ಜಯಲಲಿತಾ ಅವರನ್ನು ಆಹ್ವಾನಿಸುವುದು? ಅವರೇನೂ ಅಷ್ಟು ದೊಡ್ಡವರೇ? ಹೋಗಲಿ ಅವರು ಕನ್ನಡಕ್ಕೆ ಮಾಡಿರುವ ಸೇವೆಯಾದರೂ ಏನು ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ರಾಜ್ಯಸಭೆಗೆ ಬಾಲಿವುಡ್ ಅಭಿನೇತ್ರಿ ಹೇಮಾಮಾಲಿನಿ ರಾಜ್ಯದಿಂದ ಚುನಾಯಿತರಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ವಾಟಾಳ್ ಅವರು ಏಕೆ, ಕನ್ನಡದ ನೆಲದಲ್ಲಿ ಕನಸಿನ ಕನ್ಯೆಯರು ಇಲ್ಲವೇ?! ಎಂಬ ತುಂಟ ಪ್ರಶ್ನೆಯನ್ನು ಎತ್ತಿದ್ದಾರೆ. ಕನ್ನಡ ಕೇಂದ್ರ ಚಳವಳಿ ಸಮಿತಿ (KKCS) ಗುರುವಾರ ಇಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅತಿಥಿ ಪಾತ್ರಕ್ಕೆ ಐಶ್ವರ್ಯ ಅಸ್ತು: ಈ ಮಧ್ಯೆ, ಬೆಳಗಾವಿ ಸಮ್ಮೇಳನದಲ್ಲಿ ಅತಿಥಿ ಪಾತ್ರದಲ್ಲಿ ಪಾಲ್ಗೊಳ್ಳುವುದಕ್ಕೆ ಬಾಲಿವುಡ್ ಚೆಲುವೆ ಐಶ್ವರ್ಯ ರೈ ಒಪ್ಪಿಗೆ ಸೂಚಿಸಿದ್ದಾರೆ. ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಕೋರಿ ಸಮ್ಮೇಳನದ ವಿಶೇಷಾಧಿಕಾರಿ ಐಎಂ ವಿಠ್ಠಲಮೂರ್ತಿ ಅವರು ಸರಕಾರದ ಪರವಾಗಿ ಮಂಗಳೂರು ಮೂಲದ ಐಶ್ವರ್ಯಗೆ ವಿಶೇಷ ಆಮಂತ್ರಣ ನೀಡಿದ್ದರು. ಇದೇ ಸಂದರ್ಭದಲ್ಲಿ, ಮಾರ್ಚ್ 11ರಿಂದ ಆರಂಭವಾಗುವ ಮೂರು ದಿನಗಳ ವಿಶ್ವ ಕನ್ನಡ ಸಮ್ಮೇಳನವನ್ನು ಸ್ವತಃ ಐಶ್ವರ್ಯ ರೈ ಅವರೇ ಉದ್ಘಾಟಿಸುತ್ತಾರೆ ಎಂಬ ಊಹಾಪೋಹವೂ ಎದ್ದಿತ್ತು

0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ