ಪುಟಗಳು

ಭಾನುವಾರ, ಮಾರ್ಚ್ 6, 2011

ಬೆಳಗಾವಿ ಪ್ರವಾಸಕ್ಕೆ ಬಸ್ ವ್ಯವಸ್ಥೆ


ಬೆಂಗಳೂರು, ಮಾ. 3: ಕುಂದಾ ನಗರಿಯಲ್ಲಿ ಮಾ.11ರಿಂದ 14ರ ವರೆಗೆ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಕರ್ನಾಟಕ ರಾಜ್ಯಪ್ರವಾಸೋದ್ಯಮ ಅಭಿವೃದ್ಧಿ ನಿಗಮ(KSTDC) ಎರಡು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ. ಉತ್ತರ ಕರ್ನಾಟಕ ಭಾಗದ ನಾಲ್ಕು ದಿನಗಳ ಪ್ರವಾಸ ತೆರಳಬಹುದು. ಬೆಂಗಳೂರಿನಿಂದ ತುಂಗಭದ್ರಾ ಜಲಾಶಯ, ಹಂಪಿ, ಬಾದಾಮಿ ಐಹೊಳೆ ಮತ್ತು ಪಟ್ಟದಕಲ್ಲು ಪ್ರವಾಸ ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಒಂದು ದಿನದ ಪ್ರವಾಸ: ಬೆಳಗಾವಿಯಿಂದ ಗೋಕಾಕ್ ಪಾಲ್ಸ್, ಸವದತ್ತಿ ದೇವಸ್ಥಾನ, ನವಿಲು ತೀರ್ಥ, ಕಿತ್ತೂರಿನ ಕೋಟೆ ವೀಕ್ಷಣೆಗೆ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಆಡಳಿತ ವಿಭಾಗ ಬಾದಾಮಿ ಹೌಸ್, ಬೆಂಗಳೂರು ಅಥವಾ ದೂರವಾಣಿ ಸಂಖ್ಯೆ (080)2227 5869, 2227 5883 ಸಂಪರ್ಕಿಸಲು ಪ್ರಕಟಣೆ ಕೋರಿದೆ.

ಹೊಸ ಬಸ್ ವ್ಯವಸ್ಥೆ : ಸುಮಾರು 30 ಸುವರ್ಣ ವಾಹಿನಿ ಬಸ್ ಗಳನ್ನು ವಿಶ್ವ ಕನ್ನಡ ಸಮ್ಮೇಳನ ದ ಅಂಗವಾಗಿ ನೀಡಲಾಗಿದೆ. ಸದ್ಯಕ್ಕೆ ಚಾಲನೆಯಲ್ಲಿರುವ ಟಾಟಾ ಸಿಟಿ ಬಸ್ ಬದಲಿಗೆ 30 ವೋಲ್ವೋ ಬಸ್ ಗಳನ್ನು ನೀಡುವಂತೆ ಜಿಲ್ಲಾಡಳಿತ ಕೋರಿದೆ. ಆದರೆ ಇನ್ನೂ 20 ಹೊಸ ಬಸ್ ಕೊಡಿಸುವ ಭರವಸೆಯನ್ನು ಸರ್ಕಾರ ನೀಡಿದೆ.ಈ ಹಿಂದೆ ವಾಯುವ್ಯ ಕೆಆರ್ಟಿಸಿ(NWKRTC) ಸೇರಿದ ಸಿಟಿ ಬಸ್ ಗಳ ದರ ಏರಿಕೆ ಬಗ್ಗೆ ನಗರದಲ್ಲಿ ಅಪಸ್ವರ ಎದ್ದಿತ್ತು. ಪ್ರತಿ 2 ಕಿ.ಮೀಗೆ ರು.1 ನಂತೆ ಏರಿಸಲಾಗಿತ್ತು.

ಸಮ್ಮೇಳನದಲ್ಲಿ ಸುಮಾರು 50,000 ಅತಿಥಿಗಳಿಗೆ ವಸತಿ ಸೌಲಭ್ಯಕ್ಕೆ ಸಿದ್ಧತೆ ನಡೆದಿದೆ. ಬೆಳಗಾವಿ ನಗರದಲ್ಲಿ 24 ವೃತ್ತಗಳು ಹಾಗೂ ಗೋಡೆಗಳ ಮೇಲೆ ಕನ್ನಡತನ ಬಿಂಬಿಸುವ ಚಿತ್ರಗಳನ್ನು ಮೂಡಿಸಲಾಗಿದೆ. ಈಗಾಗಲೇ ನಗರ ಸೌಂದರ್ಯ ವೃದ್ಧಿ ಕಾರ್ಯ ಜಾರಿಯಲ್ಲಿದ್ದು, ಶೇ.80 ರಷ್ಟು ಕೆಲಸಗಳು ಮುಗಿದಿದೆ. ಉಳಿದಂತೆ ಬೆಳಗಾವಿ ತಲುಪಲು ವಿಆರ್ ಆಲ್, ಪೈ, ಬಾರ್ಡೆ, ಪಿವಿಜಿ ಮುಂತಾದ ಖಾಸಗಿ ಟ್ರಾವೆಲ್ಸ್ ಗಳು ವಿಶೇಷ ಬಸ್ ಓಡಿಸುವ ಸಾಧ್ಯತೆಗಳಿವೆ.

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

ವಿಶ್ವ ಕನ್ನಡ ಸಮ್ಮೇಳನ ಕಾರ್ಯಕ್ರಮದ ನೇರ ಪ್ರಸಾರ........