ಇಡೀ ಬೆಳಗಾವಿ ಜಿಲ್ಲೆ ಭೌಗೋಳಿಕವಾಗಿ ಹೇಗೆ ವೈವಿಧ್ಯತೆಯನ್ನು ಹೊಂದಿದೆಯೋ ಹಾಗೇನೆ ಸಾಂಸ್ಕೃತಿಕವಾಗಿ ಭಾರೀ ವೈವಿಧ್ಯತೆಯನ್ನು ಹೊಂದಿದೆ. ಅದಕ್ಕೆ ಕಾರಣಗಳು ಅಂದ್ರೆ ಜಿಲ್ಲೆಯ ವಿಸ್ತೀರ್ಣ ವ್ಯಾಪ್ತಿ ಮತ್ತು ಗಡಿ ರಾಜ್ಯದ ದಟ್ಟ ಪ್ರಭಾವ. ಬೆಳಗಾವಿ ಅಂದಾಕ್ಷಣ ಭಾರೀ ಮರಾಠಿ ಪ್ರಭಾವ ಇದ್ದು ಕನ್ನಡಾಂಬೆ ಅಪಾಯದ ಅಂಚಿನಲ್ಲಿ ಇದ್ದಾಳೆ ಎಂಬ ತಪ್ಪು ಕಲ್ಪನೆ ಅನೇಕರಿಗೆ ಇದೆ. ನಿಮಗೆ ಗೊತ್ತಿರಲಿ ಇಡೀ ಜಿಲ್ಲೆಯಲ್ಲಿ ಮರಾಠಿ ವ್ಯಾಪ್ತಿ ಕೇವಲ ಶೇ.15-18 ಮತ್ತು ಉರ್ದು ವ್ಯಾಪ್ತಿ ಶೇ.8-10. ಸ್ವಲ್ಪ ಮಟ್ಟಿಗೆ ಕೊಂಕಣಿ ಇದ್ದರೂ ಅದು ಅಷ್ಟೇನು ಪ್ರಭಾವಿ ಆಗಿಲ್ಲ. ಬಾಕಿ ಎಲ್ಲಾ ಕನ್ನಡವೇ.
ಮೊದಲೂ ಬಾಕಿ ಪ್ರದೇಶಗಳ ಬಗ್ಗೆ ಹೇಳಿ ನಂತರ ಕುಂದಾನಗರಿಗೆ ಬರುತ್ತೇನೆ. ಜಿಲ್ಲೆಯ ಬೈಲಹೊಂಗಲ, ಸವದತ್ತಿ, ರಾಮದುರ್ಗ, ಗೋಕಾಕ, ರಾಯಬಾಗ ತಾಲ್ಲೂಕುಗಳು ಅಚ್ಚ ಕನ್ನಡದ ಕಂದಮ್ಮಗಳು. ಇಲ್ಲಿ ಮರಾಠಿ ಪ್ರಭಾವ ಇಲ್ಲವೇ ಇಲ್ಲ ಅನ್ನುವಷ್ಟು ಕನ್ನಡ ಅಚ್ಚೊತ್ತಿದೆ. ಹುಕ್ಕೇರಿ ಮತ್ತು ಅಥಣಿ ತಾಲ್ಲೂಕುಗಳು ಮಹಾ ರಾಜ್ಯದೊಂದಿಗೆ ಗಡಿ ಹಂಚಿಕೊಳ್ಳುತ್ತವೆಯಾದರೂ, ಗಡಿ ಆಚೆ ಇರುವ ಕೆಲವು ಊರುಗಳು ಕೂಡ ಕನ್ನಡ ಪ್ರದೇಶಗಳೇ ಆದ್ದರಿಂದ ಇಡಿಯಾಗಿ ತಾಲ್ಲೂಕಗಳು ಮರಾಠಿ ಪ್ರಭಾವಕ್ಕೆ ಒಳಗಾಗಿಲ್ಲ. ಆದ್ರು ಇಲ್ಲಿ ಮರಾಠಾ ಜಾತಿಯ ಜನರ ಸಂಖ್ಯಾಬಲ ಸ್ವಲ್ಪ ಮಟ್ಟಿಗೆ ಇರುವುದರಿಂದ ಮರಾಠಿ ಇದೆ. ಹಾಗೇನೆ ಅನೇಕ ಕನ್ನಡಿಗರೂ ಕೂಡ ಮರಾಠಿ ಬಲ್ಲವರಾಗಿದ್ದರೆ.
ಇನ್ನು ನನ್ನ ಸ್ವಂತ ಚಿಕ್ಕೋಡಿ ತಾಲ್ಲೂಕಿನ ವಿಷಯಕ್ಕೆ ಬಂದ್ರೇ, ಗಡಿ ಭಾಗದ ನಲವತ್ತು ಹಳ್ಳಿಗಳಲ್ಲಿ ಮತ್ತು ನಿಪ್ಪಾಣಿ ಎಂಬಲ್ಲಿ ಎಪ್ಪತ್ತು ಸಾವಿರ ಜನಸಂಖ್ಯೆ ಇದ್ದು ಜಿಲ್ಲೆಯ ಮೂರನೇ ದೊಡ್ಡ ನಗರವಾಗಿದೆ. ನಗರದಲ್ಲಿ ಶೇ.90-95ಕ್ಕಿಂತಲೂ (ನನ್ನ ಊರಂತೂ ಶೇ.100) ಮರಾಠಿಮಯವಾಗಿವೆ. ಇಲ್ಲಿ ಕನ್ನಡ ಕೇಳಿ ಬರುವುದೇ ಅಪರೂಪ. ಅದೇನಿದ್ದರೂ ಹೊರಗಿನವರರಿಂದ. ಅತ್ಯಂತ ಆಶ್ಚರ್ಯದ ವಿಷಯವೆಂದರೆ, ಜಿಲ್ಲೆಯಲ್ಲಿ ರಾಜಕೀಯವಾಗಿ ಪ್ರಾಬಲ್ಯವಿರುವ ಲಿಂಗಾಯಿತರು ಕೂಡ ಈ ಭಾಗದಲ್ಲಿ ಮರಾಠಿ ಮಾತೃಭಾಷೆಯವರಾಗಿರೋದು. ಇತ್ತೀಚಿಗೆ ಅನೇಕರು ಕನ್ನಡ ಕಲಿತಿದ್ದಾರೆ. ಕನ್ನಡ ಪ್ರಭಾವಿ ಪ್ರದೇಶದಿಂದ ಮದುವೆಗಳು, ನೆಂಟಸ್ತನಗಳು ಸಾಮಾನ್ಯವಾದಾಗಿನಿಂದ ಇಲ್ಲಿ ಕೂಡ ಕನ್ನಡ ಬೆಳೆಯುತ್ತಿದೆ. (ಪ್ರಭಾಕರ ಕೋರೆಯವರ ಕುಟುಂಬ ಒಳ್ಳೆಯ ಉದಾಹರಣೆ).
ಇದನ್ನೂ ಓದಿ : ಬೆಳಗಾವಿ ಜಿಲ್ಲೆ ಬಗ್ಗೆ ನಿಮಗೆಷ್ಟು ಗೊತ್ತು?
ಕೆ.ಎಲ್.ಇ ಮತ್ತು ಮತ್ತು ಕೆಲವು ಮಠಗಳು ತಮ್ಮ ಶಿಕ್ಷಣ ಸಂಸ್ಥೆಯ ವತಿಯಿಂದ ಕನ್ನಡದ ಕಂಪನ್ನು ಇಲ್ಲಿ ಪಸರಿಸುತ್ತಿವೆ. ಇಲ್ಲಿನ ಮತ್ತೊಂದು ಅಚ್ಚರಿ ಅಂದ್ರೇ ಒಂದು ಊರಿಂದ ಇನ್ನೊಂದು ಊರಿಗೆ ಭಾಷೆಯೇ ಬದಲಾಗುವುದು. ನನ್ನ ಪಕ್ಕದ 5 ಕಿ.ಮೀ. ಅಂತರದ ಊರಿನಲ್ಲಿ ಕನ್ನಡ ಶೇ.50ಕ್ಕಿಂತಲೂ ಹೆಚ್ಚು. ಖಾನಾಪುರ ಕೂಡ ನಿಪ್ಪಾಣಿಗಿಂತ ಏನೂ ಭಿನ್ನವಾಗಿಲ್ಲ. ಅಲ್ಲಿಯೂ ಕೂಡ ಕನ್ನಡ ಬಲಶಾಲಿಯಾಗಿಯೆ ಬೆಳೆಯುತ್ತಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಇದೇ ತಾಲ್ಲೂಕಿನ ನಂದಗಡದವರು. ಇನ್ನು ಬೆಳಗಾವಿ ತಾಲ್ಲೂಕಿನ ವಿಷಯಕ್ಕೆ ಬಂದರೆ ಪಶ್ಚಿಮ ಮತ್ತು ಉತ್ತರ ಭಾಗ ಮರಾಠಿಯ ದಟ್ಟ ಪ್ರಭಾವದಲ್ಲಿ ಇದೆ. ಅದೇ ಪೂರ್ವ ಮತ್ತು ಮತ್ತು ದಕ್ಷಿಣಕ್ಕೆ ಬಂದರೆ ಮರಾಠಿ ಸತ್ತೇ ಹೋಯಿತೆನೋ ಅನ್ನೊವಷ್ಟು ಕನ್ನಡದ ಛಾಯೆ ಇದೆ. ಬೆಳಗಾವಿಯ ನಗರದ ಬಗ್ಗೆ ಹೇಳುವುದಾದರೆ ಇಲ್ಲಿ ಯಾವುದು ಹೆಚ್ಚು ಯಾವುದು ಕಡಿಮೆ ಅಂತ ಹೇಳುವುದಕ್ಕೆ ನನಗೆ ಆಗುವುದಿಲ್ಲ. ಬಹುತೇಕರಿಗೆ ಎರಡು ಭಾಷೆಗಳು ಬರುತ್ತವೆ. ನಾನ್ಯಾಕೆ ಕನ್ನಡ ಕಲಿಯಲಿ ಅನ್ನುವ ಉಡಾಫೆಯ ಕೆಲವು ಬೆರಳೆಣಿಕೆಯ ಮರಾಠಿಗರು ಇಲ್ಲಿ ಇದ್ದಾರೆ. ಇದೇ ಹಟದ ಕಾರಣದಿಂದಾಗಿ ಮರಾಠಿ ಕಲಿಯದ ಕನ್ನಡಿಗರೂ ಇದ್ದಾರೆ.
ಕನ್ನಡ ವಿಜೃಂಭಿಸುತ್ತಿದೆ : ರಾಜಕೀಯ ಮತ್ತು ಇತರೆ ಅಂಕೆ ಸಂಖ್ಯೆಗಳು ಏನೇ ಇರಲಿ ಇಲ್ಲಿ ಕನ್ನಡ ಮಾತ್ರ ವಿಜೃಂಭಿಸುತ್ತಿದೆ. ಬೆಳಗಾವಿ ಮತ್ತು ಖಾನಪುರದ ಮರಾಠಿಗರ ಬಹುತೇಕ ಹಳೆ ತಲೆಗಳು ಭಾಷಾಂಧರು. ಇದರಿಂದಾಗಿಯೆ ಎಮ್.ಇ.ಎಸ್ ಎಂಬ ದಪ್ಪ ಚರ್ಮದ, ಕಿಡಿಗೇಡಿಗಳ ಸಂಘಟನೆ ಬೆಳೆದದ್ದು. ಈಗಿನ ಯುವ ಜನಾಂಗ ಬದಲಾಗಿದೆ ಆದ್ರು ಎಮ್.ಇ.ಎಸ್ ಬೇರು ಸಮೇತ ಕಿತ್ತು ಹೋಗುವವರೆಗು ಗಲಾಟೆ ಗದ್ದಲ ಇದ್ದದ್ದೆ. ನಮ್ಮ ನಿಪ್ಪಾಣಿ ಭಾಗ ಹೆಚ್ಚು ಮರಾಠಿ ಪ್ರಾಬಲ್ಯ ಹೊಂದಿದ್ದರು ಕೂಡ ಯಾವುದೇ ಗಲಾಟೆ ಗದ್ದಲಗಳು ಇಲ್ಲ. ಎಮ್.ಇ.ಎಸ್ ಅಂತೂ ಇಲ್ಲಿ ಸತ್ತು ಹೋಗಿದೆ. ಶಿವಸೇನೆಯನ್ನು ಮೂಸಿ ನೋಡುವವರಿಲ್ಲ. ನಮ್ಮ ಕನ್ನಡದ್ದೆ ಆದ ಜೆ.ಡಿ.ಎಸ್ ನಗರಸಭೆಯಲ್ಲಿ ಆಳ್ವಿಕೆ ನಡೆಸುತ್ತಿದೆ. ಶೇ.90ಕ್ಕಿಂತಲೂ ಹೆಚ್ಚಿನ ಶ್ರೀಸಾಮಾನ್ಯನಿಗೆ ಗಡಿ ಬಿಡಿ ವಿಷಯದಲ್ಲಿ ಆಸಕ್ತಿಯೇ ಇಲ್ಲ. ಅದು ಬಗೆ ಹರಿದರೆಷ್ಟು ಬಿಟ್ಟರೆಷ್ಟು. ಯಾವ ಊರು ಯಾವ ರಾಜ್ಯಕ್ಕೆ ಹೋದರೇನು ಎಂಬ ನಿರ್ಲಿಪ್ತ ಭಾವನೆ ಇದೆ. ಗಡಿಬಿಡಿ ಗಲಾಟೆ ಬರೀ ಕೆಲವು ಸಂಘಟನೆಗಳಿಗೆ ಮಾತ್ರ ಬೇಕಾಗಿದೆ. ನನ್ನಂತವರಿಗೆ ಇದರಿಂದ ಆದಷ್ಟೂ ಬೇಗ ಮುಕ್ತಿ ಬೇಕಾಗಿದೆ (ಇದರ ಕುರಿತು ಈಗಾಗಲೇ ದಟ್ಸ್-ಕನ್ನಡದಲ್ಲಿ ನನ್ನ ಲೇಖನ ಪ್ರಕಟವಾಗಿದೆ).
ಉತ್ತರ ಕರ್ನಾಟಕದ ಸಂಸ್ಕೃತಿಯ ಬಹುತೇಕ ಅಂಶಗಳನ್ನು ಜಿಲ್ಲೆ ಹೊಂದಿದೆ. ವೀರಶೈವ ಸಂಸ್ಕೃತಿ ಜಿಲ್ಲೆಯ ಪ್ರಭಾವಿ ಸಂಸ್ಕೃತಿಯಾಗಿದೆ. ಜೈನ್ ಸಮುದಾಯ ಕೂಡ ತನ್ನ ಛಾಪನ್ನು ಕೆಲವು ಕಡೆ ಇಲ್ಲಿ ಮೂಡಿಸಿದೆ. ಇದರಲ್ಲಿ ಮರಾಠಿ ಮತ್ತು ಕನ್ನಡ ಎಂಬ ಎರಡು ವರ್ಗಗಳಿವೆ. ಮರಾಠಿ ಭಾಗದಲ್ಲಿ ಮತ್ತು ಕೆಲವು ಕಡೆ ಮರಾಠಾ ಸಂಸ್ಕೃತಿ ತನ್ನ ಎಲ್ಲೆ ಬೀಸಿದೆ. ಬ್ರಾಹ್ಮಣ ಸಂಸ್ಕೃತಿ ಹೆಚ್ಚಾಗಿ ನಗರ ಪ್ರದೇಶಕ್ಕೆ ಸೀಮಿತ. ಇದರಲ್ಲೂ ಮರಾಠಿ ಮತ್ತು ಕನ್ನಡ ವರ್ಗಗಳು. ಹಿಂದುಳಿದ ವರ್ಗಗಳ ವಿಷಯಕ್ಕೆ ಬಂದರೆ ಕುರುಬರು ನಿರ್ಣಾಯಕರು. ದಲಿತರಲ್ಲಿ ಪ್ರಮುಖವಾಗಿ ಬೇಡರ ಸಂಸ್ಕೃತಿಯ ಛಾಯೆ ಇದೆ. ಇಸ್ಲಾಂ ಕೂಡ ಬರೀ ನಗರ ಪ್ರದೇಶಕ್ಕೆ ಸೀಮಿತ. ಊಟ ಮತ್ತು ಉಡಿಗೆ ತೊಡಿಗೆ ಎಲ್ಲ ಮಹಾ ರಾಜ್ಯ ಮತ್ತು ಉ.ಕ. ಶೈಲಿಯಲ್ಲೆ ಇದೆ. ಬೆಳಗಾವಿ ಕುಂದಾ ಮತ್ತು ಗೋಕಾಕ ಕರದಂಟು ಬಗ್ಗೆ ನಿಮಗೆ ಹೇಳಲೆ ಬೇಕಾಗಿಲ್ಲ. ನಮ್ಮ ನಿಪ್ಪಾಣಿ ಮಿಸಳ್-ಬ್ರೆಡ್ ಬಗ್ಗೆ ಮಾತ್ರ ನಿಮಗೆ ಉಲ್ಲೇಖಿಸಲೇಬೇಕು.
ಚಂದ್ರಶೇಖರ ಕಂಬಾರ, ಬಸವರಾಜ ಕಟ್ಟಿಮನಿ, ಏಣಗಿ ಬಾಳಪ್ಪ, ಕೃಷ್ಣಮೂರ್ತಿ ಪುರಾಣಿಕ, ಬೇಟಗೆರಿ ಕೃಷ್ಣಶರ್ಮ ಮುಂತಾದ ಅನೇಕರು ನಾಡಿನ ಕನ್ನಡ ಹಿರಿಮೆಯ ಸಾಂಸ್ಕೃತಿಕ ರಾಯಭಾರಿಗಳು ಕನ್ನಡ ನಾಡನ್ನು ಶ್ರೀಮಂತಗೊಳಿಸಿದ್ದಾರೆ. ಸಂಗೀತ ಲೋಕಕ್ಕೆ ಬೆಳಗಾವಿ ತವರೂರು. ಎರಡು ಭಾಷೆಗಳ ಕಲೆ ಮತ್ತು ಸಂಗೀತಕ್ಕೆ ತನ್ನದೇ ಆದ ಕೊಡುಗೆ ನೀಡಿದೆ.
ರಾಜಕೀಯ: ರಾಜಕೀಯದ ವಿಷಯಕ್ಕೆ ಬಂದ್ರೆ, ಮೊದಲನೇ ರಾಜಧಾನಿ ಜಿಲ್ಲೆ ಹೇಗೆ ಪ್ರಭಾವಶಾಲಿಯೋ ಹಾಗೆನೇ ಎರಡನೇ ರಾಜಧಾನಿ ಜಿಲ್ಲೆ ಕೂಡ ರಾಜಕೀಯ ಪಕ್ಷದ ದಿಕ್ಕನ್ನೇ ಬದಲಿಸಬಲ್ಲಷ್ಟು ಪ್ರಭಾವಿ. ಬೆಂಗಳೂರು(28 ಶಾಸಕರು,12.5%) ಮತ್ತು ಬೆಳಗಾವಿ(18 ಶಾಸಕರು, 8.1%) ಎರಡೇ ಜಿಲ್ಲೆಗಳು ಕರ್ನಾಟಕದ ಶೇ.20ರಷ್ಟು ಶಾಸಕರನ್ನು ತಮ್ಮ ಪ್ರತಿನಿಧಿಗಳನ್ನಾಗಿ ಆರಿಸಿ ಕಳಿಸುತ್ತವೆ. ಬೆಳಗಾವಿ ನಗರ ಮತ್ತು ತಾಲ್ಲೂಕಿನ ಮೂರು ಮತ್ತು ಖಾನಾಪುರ ವಿಧಾನಸಭೆ ಕ್ಷೇತ್ರಗಳಲ್ಲಿ ಮಾತ್ರ ಎಮ್.ಇ.ಎಸ್ ಎಂಬ ಕತ್ತೆ ತನ್ನನ್ನು ತಾನು ಕುದುರೆ ಎಂದುಕೊಂಡು ಹೇಳಿ ರಾಜಕೀಯ ರೇಸ್-ನಲ್ಲಿ ಹುಚ್ಚಾಟ ಆಡುತ್ತದೆ. ಮುಗ್ಧ ಮರಾಠಿಗರು ಹಿಂದೆ ಈ ಕತ್ತೆಗೆ ಬಹಳ ಮಾರು ಹೋಗಿದ್ದರಾದರೂ ಈಗ ಆ ಭ್ರಮೆಯಿಂದ ಸ್ವಲ್ಪ ಮಟ್ಟಿಗೆ ಹೊರಬಂದಿದ್ದಾರೆ. ಆದರೂ ನಗರಪಾಲಿಕೆ, ಕೆಲವು ತಾ.ಪಂ ಮತ್ತು ಜಿ.ಪಂಗಳಲ್ಲಿ ಈ ಇವರ ನಡೆಯುತ್ತದೆ. ಬಹಳ ಜನ ಮರಾಠಿಗರು ಇಲ್ಲಿ ಶಾಂತಿ ಸಹಬಾಳ್ವೆಯಿಂದಲೇ ಇದ್ದಾರೆ. ನಿಪ್ಪಾಣಿಯಲ್ಲಿ ಮಾತ್ರ ಅದಕ್ಕೆ ಕ್ಯಾರೇ ಅನ್ನುವವರು ಇಲ್ಲ. ಬಾಕಿ ಎಲ್ಲ ಕಡೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ.
ಇನ್ನು ಜಾತಿ ಲೆಕ್ಕಾಚಾರವನ್ನು ಈ ಮೊದಲೇ ಹೇಳಿದ್ದೇನೆ. ಇದು ಲಿಂಗಾಯಿತ ಪ್ರಭಾವಿ ಜಿಲ್ಲೆಯಾದ್ರು ಜಾತ್ಯತೀತವಾಗಿ ನಡೆದುಕೊಂಡಿದೆ. ದಲಿತ ವರ್ಗಕ್ಕೂ ಕೂಡ ತನ್ನ ಹಕ್ಕು ಸಾಧಿಸಲು ಅವಕಾಶ ಕೊಟ್ಟಿದೆ. ದ.ಕದಲ್ಲಿ ಒಕ್ಕಲಿಗರನ್ನು ಗೌಡರು ಎಂದು ಸಂಬೋಧಿಸಿದಂತೆ ಇಲ್ಲಿ ಲಿಂಗಾಯಿತರನ್ನು ಗೌಡರು ಎನ್ನಲಾಗುತ್ತದೆ. ನಾನು 25 ವರ್ಷದವನಾದರು ನನ್ನನ್ನು ಈಗಲೂ ಸಣ್ಣ ಗೌಡರು ಅಂತಾನೆ ಕರಿತಾರೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳೇ ನಿರ್ಣಾಯಕ. ಜೆಡಿಎಸ್ ಕುದುರೆ ಅದರ ಸವಾರನ ಮೇಲೆ ಅವಲಂಬಿತವಾಗಿದೆ. ಲಿಂಗಾಯಿತರು ಬರೀ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬ ಆರೋಪವನ್ನು ಈ ಜಿಲ್ಲೆ ಸುಳ್ಳು ಎಂದು ತೋರಿಸಿದೆ

ಕೃಪೆ :thatskannada
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ