ಪುಟಗಳು

ಗುರುವಾರ, ಮಾರ್ಚ್ 3, 2011

ಅನಿವಾಸಿ ಕನ್ನಡಿಗರಿಗೆ ಮುಖ್ಯಮಂತ್ರಿ ಕರೆಯೋಲೆ

ಸನ್ಮಾನ್ಯರೇ, ವಿಶ್ವಕನ್ನಡ ಸಮ್ಮೇಳನ ಕನ್ನಡಿಗರ ಹೆಮ್ಮೆಯ ಐತಿಹಾಸಿಕ ಸಮಾರಂಭ. ಇಪ್ಪತೈದು ವರ್ಷಗಳ ನಂತರ ಇಂತಹ ಸಮ್ಮೇಳನವು 2011 ಮಾರ್ಚ್ 11ರಿಂದ 13ರವರೆಗೆ ಬೆಳಗಾವಿ ನಗರದಲ್ಲಿ ನಡೆಯಲಿದೆ. ವಿಶ್ವದಾದ್ಯಂತ ನೆಲೆಸಿರುವ ಸಕಲ ಕನ್ನಡಿಗರು ಈ ಸಮ್ಮೇಳನದಲ್ಲಿ ಭಾಗವಹಿಸಬೇಕೆಂಬುದು ನನ್ನ ಅಪೇಕ್ಷೆ.

ಕರ್ನಾಟಕ ಹೊರಗಿದ್ದುಕೊಂಡೂ ತಾವು ಕನ್ನಡ ನಾಡು ನುಡಿಗೆ ಸಲ್ಲಿಸಿರುವ ಸೇವೆ ಅನನ್ಯ. ಈ ಕಾರ್ಯಕ್ರಮ ನಿಮ್ಮಂತಹ ಕನ್ನಡಿಗರ ಉಪಸ್ಥಿತಿಯಿಂದ ಹೆಚ್ಚು ಅರ್ಥಪೂರ್ಣವಾಗುತ್ತದೆ, ಕಾಲಾವಕಾಶ ತುಂಬ ಕಡಿಮೆ ಇದೆ. ತಾವು ದಯಮಾಡಿ, ಬಿಡುವು ಮಾಡಿಕೊಂಡು ಈ ಐತಿಹಾಸಿಕ ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ವಿನಂತಿ. ತಮ್ಮ ಆಗಮನದ ನಿರೀಕ್ಷೆಯಲ್ಲಿರುವ,

ತಮ್ಮ ವಿಶ್ವಾಸಿ

-ಬಿ.ಎಎಸ್ ಯಡಿಯೂರಪ್ಪ, ಮುಖ್ಯಮಂತ್ರಿ
ಬೆಂಗಳೂರು-ಕರ್ನಾಟಕ
English summary
Karnataka Chief Minister BS Yeddyurappa's invitation to NRI Kannada diaspora to participate in Vishwa Kannada Sammelana (World Kannada Convention) to be in held in Karnataka Maharashtra border city Belagavi 11-13 March 2011

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

ವಿಶ್ವ ಕನ್ನಡ ಸಮ್ಮೇಳನ ಕಾರ್ಯಕ್ರಮದ ನೇರ ಪ್ರಸಾರ........